ಕಾರ್ನ್‍ಫೋರ್ಡ್, ಫ್ರಾನ್ಸಸ್ ಕ್ರಾಫ್ಟ್ಸ್

 1886-1960. ಕವಯಿತ್ರಿ. ಚಾಲ್ರ್ಸ್ ಡಾರ್ವಿನ್ನನ ಮೊಮ್ಮಗಳು. ತಾಯಿ ಇಂಗ್ಲೆಂಡಿನ ನ್ಯೂನ್‍ಹ್ಯಾಂನಲ್ಲಿ ಅಧ್ಯಾಪಕಿಯಾಗಿದ್ದಳು. 1908ರಲ್ಲಿ ಈಕೆ ಕೇಂಬ್ರಿಜ್‍ನ ಪ್ರಾಚೀನ ತತ್ತ್ವಶಾಸ್ತ್ರದ ಪ್ರಾಧ್ಯಾಪಕ ಕಾರ್ನ್‍ಫೋರ್ಡ್‍ನನ್ನು ವಿವಾಹವಾದಳು. ಡೆತ್ ಅಂಡ್ ದಿ ಪ್ರಿನ್ಸ್‍ಸ್, ಎ ಮೊರಾಲಿಟಿ (1912) ಎಂಬ ಗ್ರಂಥ ಈಕೆಯ ಮೊದಲ ಪ್ರಕಟಣೆ. ಸ್ಪ್ರಿಂಗ್ ಮಾರ್ನಿಂಗ್ (1915), ಆಟಮ್ ಮಿಡ್‍ನೈಟ್ (1923), ಡಿಫರೆಂಟ್ ಡೇಸ್ (1928), ಮೌಂಟನ್ಸ್ ಅಂಡ್ ಮೋಲ್‍ಹಿಲ್ಸ್ (1934) ಈಕೆಯ ಕವನ ಸಂಗ್ರಹಗಳು. 1959ರಲ್ಲಿ ಪದ್ಯರಚನೆಗಾಗಿ ಈಕೆಗೆ ಚಕ್ರವರ್ತಿನಿಯ ಪದಕ ದೊರಕಿತು.   

    (ಎನ್.ಎಸ್.ಎಲ್.)

 
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ